Live Love Laugh...
30 July 2019

ವೃತ್ತಿ ಸ್ಥಳದಲ್ಲಿ ಮಾನಸಿಕ ಅನಾರೋಗ್ಯದ ಕುರಿತು ಮಾತನಾಡುವುದು

ಪ್ರೌಢಾವಸ್ಥೆಯಲ್ಲಿ ಉಪಜೀವನಕ್ಕೆ ಮಾರ್ಗ ಕಂಡುಕೊಳ್ಳುವುದು, ಆಹಾರ, ಆರ್ಥಿಕ ಭದ್ರತೆ ಮತ್ತು ಆಶ್ರಯವನ್ನು ಒದಗಿಸುವುದು. ಪರಸ್ಪರ ಸಂಬಂಧಗಳನ್ನು ಕಟ್ಟಿಕೊಳ್ಳುವಂಥ ಸ್ಥಳ ರೂಪಿಸುವುದು ಮತ್ತು ತನ್ನತನವನ್ನು ಅರಿತು ದಕ್ಷತೆಯನ್ನು ಮೆರೆಯುವುದು ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವಲ್ಲಿ ವೃತ್ತಿ ಜೀವನ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಬಹಳಷ್ಟು ಜನ ಯುವಕರು ತಮ್ಮ ಅಧಿಕಾಂಶ ಸಮಯವನ್ನು ವೃತ್ತಿ ಸ್ಥಳದಲ್ಲೇ ಕಳೆಯುತ್ತಾರೆ ಆದ್ದರಿಂದಲೇ ಅವರ ಮಾನಸಿಕ ಮತ್ತು ದೈಹಿಕ ರೋಗ್ಯದ ಮೇಲೆ ಅದರ ಪರಿಣಾಮ ಕಂಡುಬರುತ್ತದೆ

Discussing mental illness at workplace

ಕಾರ್ಪೋರೇಟ್ ಉದ್ಯೋಗಿಗಳಲ್ಲಿ 80% ಜನರು ಆತಂಕಕ್ಕೆ ಸಂಧಿಸಿದ ರೋಗ ಲಕ್ಷಣಗಳನ್ನು ತೋರ್ಪಡಿಸಿದ್ದರೆ 55% ರಷ್ಟು ಜನರು ಖಿನ್ನತೆಯ ಲಕ್ಷಣಗಳನ್ನು ತೋರ್ಪಡಿಸಿದ್ದಾರೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಅಷ್ಟೇ ಅಲ್ಲದೆ ಭಾರತೀಯರು ವಾರಕ್ಕೆ ಸುಮಾರು 52 ಗಂಟೆಗಳಷ್ಟು ಸಮಯವನ್ನು ವೃತ್ತಿ ಸ್ಥಳದಲ್ಲಿ ಕಳೆಯುತ್ತಾರೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಇತರ 25 ದೇಶಗಳಿಗೆ ಹೋಲಿಸಿದಲ್ಲಿ ಇದು ಅತ್ಯಂತ ಹೆಚ್ಚಿನ ಸಮಯವಾಗಿದೆ. ಜೊತೆಗೆ 46% ರಷ್ಟು ಭಾರತೀಯ ಉದ್ಯೋಗಿಗಳು ಒತ್ತಡದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿರಂತರವಾಗಿ ಒತ್ತಡಕ್ಕೊಳಗಾಗುವುದು ಆ ವ್ಯಕ್ತಿಯ ಆರೋಗ್ಯ ಮತ್ತು ಸುಖಕರ ಜೀವನಕ್ಕೆ ಭಾರಿ ಹಾನಿಯನ್ನುಂಟು ಮಾಡುತ್ತದೆ. ಕೆಲವರಲ್ಲಿ ಒತ್ತಡ - ಆಯಾಸ, ರೋಗ ನಿರೋಧಕ ಶಕ್ತಿ ತಗ್ಗುವುದು, ನಿದ್ರಾಹೀನತೆ ಮತ್ತು ಇತರ ಸಮಸ್ಯೆಗಳುಳ್ಳ ದೈಹಿಕ ಲಕ್ಷಣಗಳಿಗೆ ಎಡೆಮಾಡಿಕೊಡುತ್ತದೆ.

ಭಾರತದಲ್ಲಿ ಮಾನಸಿಕ ಅಸ್ವಸ್ಥತೆ ಕುರಿತು ಬಹುದೊಡ್ಡ ತಪ್ಪುಕಲ್ಪನೆಯಿದೆ. ಇದು ಜನರು ತಾವು ಎದುರಿಸುತ್ತಿರುವಂಥ ಸಮಸ್ಯೆಗಳ ಕುರಿತು ಮತ್ತು ತಮಗೆ ಬೇಕಾದ ಅವಶ್ಯಕ ಬೆಂಬಲ ನೆರವಿನ ಕುರಿತು ಮುಕ್ತವಾಗಿ ಮಾತನಾಡದಂತೆ ತಡೆಗೋಡೆಯನ್ನು ನಿರ್ಮಿಸಿದೆ. ಮಾನಸಿಕ ಅಸ್ವಸ್ಥತೆ ಸ್ವರೂಪದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದರಿಂದ ತಪ್ಪುಕಲ್ಪನೆ ಉಂಟಾಗುತ್ತದೆ ಮತ್ತು ಇದಕ್ಕೆ ಸೂಕ್ತವಲ್ಲದವರೆಲ್ಲರನ್ನೂ ಬೇರ್ಪಡಿಸುತ್ತದೆ.

ಇದು ನಿಮ್ಮನ್ನು ನಿಮ್ಮ ಮಾನಸಿಕ ಅಸ್ವಸ್ಥತೆ ಕುರಿತು ನಿಮ್ಮ ಬಾಸ್ ಬಳಿ ಮಾತನಾಡದಂತೆ ಭಯ ಹುಟ್ಟಿಸುತ್ತದೆ ಅಥವಾ ತಡೆಯುತ್ತದೆ. ಆದರೆ ನೀವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಕಳವಳವನ್ನು ಗುರುತಿಸುವ ಮತ್ತು ಕಾಳಜಿವಹಿಸುವುದು ಮಹತ್ವಪೂರ್ಣವಾದುದು. ಒಬ್ಬ ಮ್ಯಾನೇಜರ್ ಇಲ್ಲವೆ ಬಾಸ್ ಅವರನ್ನು ಸಂಪರ್ಕಿಸುವ ಮೊದಲು ಈ ವಿಷಯವನ್ನು ನೀವು ಏಕೆ ಅವರೊಂದಿಗೆ ಹಂಚಿಕೊಳ್ಳುತ್ತಿದ್ದೀರಿ ಮತ್ತು ಸಂಸ್ಥೆಯಿಂದ ನಿಮಗೆ ಯಾವ ಬಗೆಯ ಸಹಾಯ ಬೇಕಿದೆ ಎಂಬುದನ್ನು ನಿರ್ಧರಿಸಿಕೊಳ್ಳಿ. ನೀವು ಆಡಳಿತ ಸಿಬ್ಬಂದಿ ಎದುರು ಈ ವಿಷಯ ತೆರೆದಿಡುವುದರಿಂದ ನಿಮ್ಮ ಅವಶ್ಯಕತೆಗಳ ಕುರಿತು ಆಡಳಿತವರ್ಗಕ್ಕೆ ಮಾಹಿತಿ ನೀಡಿ ಮತ್ತು ನಿಮ್ಮ ಆರೋಗ್ಯ ಮತ್ತು ಉತ್ಪಾದಕತೆ ಹೆಚ್ಚಳಕ್ಕೆ ಅನುಕೂಲವಾಗುವಂತೆ ಸುತ್ತಮುತ್ತಲ ವಾತಾವರಣ ಬದಲಾವಣೆಗೆ ಪ್ರಯತ್ನಿಸುತ್ತೀರಿ. ನಿಮಗೆ ಬಾಸ್ ಇಲ್ಲವೆ ಮ್ಯಾನೇಜರ್ ಜೊತೆ ಮಾತನಾಡಲು ಇರುಸು ಮುರುಸೆನಿಸಿದರೆ ಮಾನವ ಸಂಪನ್ಮೂಲ ವಿಭಾಗದಲ್ಲಿ ಯಾರೊಂದಿಗಾದರೂ ಮಾತನಾಡುವುದು ಉತ್ತಮ ಆರಂಭ.

ಮಾನಸಿಕ ಆರೋಗ್ಯ ಸಂರಕ್ಷಣೆ ಕಾಯ್ದೆ 2017 ನ್ನು ಜಾರಿಗೊಳಿಸುವ ಮೂಲಕ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡುವುದು ಅದೇ ವೇಳೆ ಇದರಿಂದ ಸರ್ಕಾರೀ ಅಥವಾ ಇತರ ಯಾವುದೇ ಸಂಸ್ಥೆಯಿಂದ ತಾರತಮ್ಯವಾಗದಂತೆ ಖಚಿತಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ನೀವು ನಿಮ್ಮ ಮ್ಯಾನೇಜರ್ ಇಲ್ಲವೆ ಸಹೋದ್ಯೋಗಿಗಳ ಬಳಿ ಈ ವಿಷಯ ಹಂಚಿಕೊಳ್ಳುವ ಕುರಿತು ಯಾವುದೇ ರೀತಿಯ ಒತ್ತಡ ಎದುರಿಸಬೇಕಿಲ್ಲ ಎಂದು ಹೇಳಲಾಗಿದೆ. ಈ ವಿಷಯ ವಯಕ್ತಿಕವಾದದ್ದು ಮತ್ತು ಯಾರೊಂದಿಗೆ ನಿಮಗೆ ಹಿತವೆನಿಸುತ್ತದೋ ಅವರೊಂದಿಗೆ ಮಾತ್ರ ಹಂಚಿಕೊಳ್ಳಿ

ಮೇಲಿನ ಶಾಸನ ಇಂಥ ಸಂಕಷ್ಟದಲ್ಲಿರುವವರನ್ನು ರಕ್ಷಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದರೂ ವೃತ್ತಿಸ್ಥಳ ಇಂಥ ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜುಗೊಂಡಿಲ್ಲ. ನಿಮ್ಮ ಮಾನಸಿಕ ಅಸ್ವಸ್ಥತೆಯ ಕುರಿತು ನೀವು ಹೇಳುವುದನ್ನು ಮುಕ್ತ ಮನಸ್ಸಿನಿಂದ ಅಥವಾ ಆತ್ಮೀಯತೆಯಿಂದ ಸ್ವೀಕರಿಸಲಾಗುವುದಿಲ್ಲ. ಭಾರತೀಯ ಕಾರ್ಪೋರೇಟ್ ಗಳು ಇಂಥ ಸಂದರ್ಭಗಳನ್ನು ನಿಭಾಯಿಸಲು ಸಿದ್ಧಗೊಂಡಿಲ್ಲ ಅಥವಾ ತರಬೇತಿ ಹೊಂದಿಲ್ಲ. ಹಾಗಾಗಿ ನಿಮಗೆ ಬೇಕಾದ ನೆರವನ್ನು ನೀವೂ ಪಡೆಯದೇ ಇರಬಹುದು.

ವೃತ್ತಿ ಸ್ಥಳದಲ್ಲಿ ಈ ವಿಚಾರ ಚರ್ಚಿಸಲಾರಂಭಿಸಿದ ನಂತರ ನೀವು ನಿಮ್ಮಂತೆ ಸಂಕಷ್ಟ ಎದುರಿಸುತ್ತಿರುವವರಿಗೆ ಶಕ್ತಿಯನ್ನು ನೀಡುತ್ತೀರಿ ಮತ್ತು ಬದಲಾವಣೆ ಪರಿಣಾಮ ಬೀರಬಲ್ಲದು ಎಂಬ ಭರವಸೆ ಕಲ್ಪಿಸುತ್ತೀರಿ. ಮಾನಸಿಕ ಸ್ವಾಸ್ಥ್ಯದ ಬಗ್ಗೆ ಮುಕ್ತ ಮಾತುಕತೆ ಆರಂಭಿಸುವುದು ನಿಮ್ಮ ಸುತ್ತಮುತ್ತಲಿನ ಕಳವಳವನ್ನು ತಗ್ಗಿಸಲು ಮತ್ತು ಎಲ್ಲರಿಗೂ ಒಟ್ಟಾರೆ ಸುರಕ್ಷಿತವಾದ ವಾತಾವರಣ ಸೃಷ್ಟಿಸಲು ಕೂಡಾ ಒಂದು ಅವಕಾಶವಾಗಿದೆ.

X